ಕಳಸ-ಕುದುರೆಮುಖ ಮುಖ್ಯ ರಸ್ತೆಯ ಶ್ರೀರಾಮ ಎಸ್ಟೇಟ್ ಸಮೀಪ ಕಳೆದ ಎರಡು ವಾರಗಳ ಹಿಂದೆ ಮರವೊಂದು ಗಾಳಿಗೆ ಬಿದ್ದಿದ್ದು ಅದರ ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು ಇದಕ್ಕೆ ವಾಹನಗಳು ತಾಗಿ ತೊಂದರೆ ಉಂಟಾಗುತ್ತಿದೆ.ಈಗಾಗಲೇ ಈ ಬಿದ್ದ ಮರದಿಂದ ಹಲವಾರು ಅಪಘಾತಗಳು ಆಗಿದ್ದು,ಇದಕ್ಕೆ ಅಲ್ಲಿ ಬಿದ್ದಿರುವ ಗ್ಲಾಸಿನ ಚೂರುಗಲೇ ಸಾಕ್ಷಿ ಹೇಳುತ್ತಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಬೈಕಿನಲ್ಲಿ ಬಂದಿರುವ ಪ್ರವಾಸಿಗರಿಬ್ಬರಿಗೆ ಈ ಮರದ ಕೊಂಬೆಗೆ ಬೈಕ್ ತಾಗಿ ಬಿದ್ದು ಪೆಟ್ಟು ಮಾಡಿಕೊಂಡು ಹೋಗಿದ್ದಾರೆ.ಪ್ರತಿ ನಿತ್ಯ ಇದರಿಂದ ಸಮಸ್ಯೆಗಳು ಆಗುತ್ತಿದ್ದರೂ ಕೂಡ ಈ ಮರವನ್ನು ಇಲ್ಲಿಂದ ತೆರವು ಮಾಡುವ ದೊಡ್ಡ ಮನಸ್ಸು ಯಾರೂ ಮಾಡುತ್ತಿಲ್ಲ.
ಕೂಡಲೇ ಈ ಮರವನ್ನು ತೆರವು ಮಾಡಿ ವಾಹನ ಸವಾರರಿಗಾಗುವ ತೊಂದರೆಯನ್ನು ತಪ್ಪಿಸಿ ಎನ್ನುವುದೇ ಕಳಸ ಲೈವ್ ಕಳಕಳಿ.