ಕಳಸ-ಕುದುರೆಮುಖ ಮುಖ್ಯ ರಸ್ತೆಯ ಶ್ರೀರಾಮ ಎಸ್ಟೇಟ್ ಸಮೀಪ ಕಳೆದ ಎರಡು ವಾರಗಳ ಹಿಂದೆ ಧರೆ ಜರಿದು ರಸ್ತೆಗೆ ಬಿದ್ದಿದ್ದು ಅದನ್ನು ತೆರವು ಮಾಡದೆ ಇರುವ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಪ್ರಾಣ ಸಂಕಟವಾಗಿದೆ.
ರಸ್ತೆಯ ತಿರುವಿನಲ್ಲಿ ಮಣ್ಣು ಕಲ್ಲುಗಳು ರಸ್ತೆಗೆ ಬಿದ್ದು ಇದು ಈ ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ತಿಳಿಯದೆ ತೊಂದರೆಯಾಗುತ್ತಿದೆ.
ಹಲವಾರು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.ಅಲ್ಲಿಯ ಚರಂಡಿಯೂ ಮುಚ್ಚಿಹೋಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ.ಸಂಬಂಧ ಪಟ್ಟವರು ಕೂಡಲೇ ರಸ್ತೆ ತೆರವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.