ಕಳಸ ತಾಲ್ಲೂಕಿನಲ್ಲಿ ಬಿಪಿಎಲ್ ಕಾರ್ಡ್ ಇದ್ದು, ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿದ್ದವರ ನೂರಾರು ಜನರ ಮನೆ ಬಾಗಿಲಿಗೆ ಸರ್ಕಾರ ಕಾರಣ ಕೇಳಿ ನೋಟೀಸು ಜಾರಿ ಮಾಡಿದೆ.
ನಾಲ್ಕು ಚಕ್ರದ ಕಾರು ಹೊಂದಿದ್ದು ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದೀರಿ.ಸ್ವಯಂ ಪ್ರೇರಣೆಯಿಂದ ಪಡಿತರ ಚೀಟಿಯನ್ನು ಹಿಂತಿರುಗಿಸಿ ಎಂದು ಪ್ರಕಟಣೆ ಹೊರಡಿಸಿದ್ದರೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವುದು ಕಾನೂನು ಬಾಹಿರವಾಗಿದೆ.
ಪಡಿತರ ಚೀಟಿಯಿಂದ ಸರ್ಕಾರದ ಸಹಾಯಧನಯುಕ್ತ ಆಹಾರಧಾನ್ಯಗಳನ್ನು ಪಡೆಯುವ ಮೂಲಕ ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಬಗ್ಗೆ ನಿಯಮಾನುಸಾರ ದಂಡವನ್ನು ವಸೂಲಿ ಮಾಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂದು ಕಾರಣ ಕೇಳಿ ನೋಟಿಸು ನೀಡಿದೆ.
ಇದು ಸಾಲ ಶೂಲ ಮಾಡಿ ಸೆಕೆಂಡ್ ಹ್ಯಾಂಡ್ ಕಡಿಮೆ ಧರದ ಕಾರು ಕೊಂಡ ಬಡವನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೆಲ ವರ್ಷಗಳಿಂದ ಹಳೆಯ 800 ಕಾರು ಹೊಂದಿದ್ದೇನೆ ನನಗೆ ನೊಟೀಸು ಬಂದಿದೆ.ಲಕ್ಷಾನುಗಟ್ಟಲೆ ದಂಡ ನಾನು ಎಲ್ಲಿಂದ ಕಟ್ಟಲಿ ನನಗೆ ಆತ್ಮಹತ್ಯೆಯೊಂದೆ ದಾರಿ ಎಂದು ಸಂಸೆಯ ವ್ಯಕ್ತಿಯೊಬ್ಬರು ಅಸಾಯಕತೆಯಿಂದ ಹೇಳುತ್ತಾರೆ.