ಕಳಸ ಜೈನ್ ಮಿಲನ್ ಅಧ್ಯಕ್ಷರನ್ನಾಗಿ ಕೆ.ಎ.ಶ್ರೇಣಿಕ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿ.ಡಿ.ಧರ್ಮಪಾಲ್ ಜೈನ್ ನಿರ್ದೆಶಕರು,ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಇವರು ತಿಳಿಸಿದ್ದಾರೆ.
ಗುರುವಾರ ಕಳಸದ ಮಹಾವೀರ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಆರ್.ಕೆ.ಬ್ರಹ್ಮದೇವ(ಗೌರವಾಧ್ಯಕ್ಷರು), ಕೆ.ಎ.ಶ್ರೇಣಿಕ(ಅಧ್ಯಕ್ಷರು), ಶ್ರೀಮತಿ ಸುಶೀಲ ಜಯಕೀರ್ತಿ, ಜನಿಗೆ(ಉಪಾಧ್ಯಕ್ಷರು), ಜಯಕೀರ್ತಿ ಗುಮ್ಮಿನಕಾಡು(ಕಾರ್ಯದರ್ಶಿ), ಸುಹಾನ್ ಜೇನುಗೂಡು(ಖಜಾಂಚಿ), ಸಂಚಾಲಕರಾಗಿ ವಿನಯ ಎಂ.ಎ ಮುದ್ದನ್ಪಾಲ್, ಶ್ರೀಮತಿ ಮನೋರಾಧಿನಿ ಕೆ.ಸಿ.ಧರಣೇಂದ್ರ, ಶ್ರೀಮತಿ ಕಿರಣ ಬ್ರಹ್ಮದೇವ, ಶ್ರೀಮತಿ ಸುಮತಿ ನಿರ್ಮಲ್ ಕುಮಾರ್.
ಈ ಸಂದರ್ಭದಲ್ಲಿ ಜೈನ್ ಮಿಲನ್ ಹಿರಿಯ ನಿರ್ದೇಶಕರಾದ ಡಿ.ಕೆ.ಜೈನ್ ಸಂಸೆ, ಮತ್ತು ಮಾಜಿ ಅಧ್ಯಕ್ಷರಾದ ಪ್ರದೀಪ್ ಕಡೇಪಾಲ್ ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.