ಕಳಸ ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಮಾದರಿ ಆಂಬ್ಯುಲೆನ್ಸ್ ನೀಡಿದರೂ ಕೂಡ ಅದರ ಟಯರ್ ಸಮಸ್ಯೆಯಿಂದ ಕಳೆದ ಒಂದು ವಾರದಿಂದ 108 ನಿಂತಲ್ಲೇ ನಿಂತಿದೆ.
ಕಳಸ ಆಸ್ಪತ್ರೆಗೆ Advance Life Support Ambulance ನೀಡಲಾಗಿದೆ.ಇದರ ಟಯರ್ ಗಾಗಿ ಕಳೆದ ಐದು ತಿಂಗಳ ಹಿಂದೆಯೇ ಪ್ರಸ್ತಾವಣೆ ಕಳುಹಿಸಲಾಗಿದೆ.ಆದರೆ ಈಗ ಟಯರ್ ಸಂಪೂರ್ಣವಾಗಿ ಸವೆದು ಹೋಗಿದ್ದು, ಓಡಿಸಲು ಅಸಾಧ್ಯವಾಗಿದೆ.ಇದಕ್ಕೆ ಕಳೆದ ಒಂದು ವಾರಗಳಿಂದ ನಿಲ್ಲಿಸಲಾಗಿದೆ ಎಂದು ಇದರ ಚಾಲಕ ಹೇಳುತ್ತಾರೆ.
ಬಡವರ ಸೇವೆಗಾಗಿ ನೀಡಿರುವ ಅಂಬ್ಯೂಲೆನ್ಸ್ ನ ಈ ಸಮಸ್ಯೆಯಿಂದ ನೂರಾರು ರೋಗಿಗಳಿಗೆ ಸಮಸ್ಯೆ ಎದುರಾಗಿದೆ.ಸಂಭಂದಿಸಿದರು ಕೂಡಲೇ ಇದಕ್ಕೆ ಸ್ಪಂದಿಸಬೇಕು ಇಲ್ಲವಾದಲ್ಲಿ 108 ಆಂಬ್ಯುಲೆನ್ಸ್ ಗೆ ಎತ್ತು ಕಟ್ಟುವ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಯೂತ್ ಅಧ್ಯಕ್ಷ ಕೆ.ಸಿ.ಮಹೇಶ್ ಹೇಳಿದ್ದಾರೆ.