ಜೆ.ಸಿ.ಐ ಕಳಸ ಘಟಕದ ವತಿಯಿಂದ ಕಳಸದ ಕೈಮರದಲ್ಲಿ ನೂತನವಾಗಿ ನಿರ್ಮಿಸಿದ ಜೇಸಿ ವೃತ್ತದ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆ.ಸಿ.ಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಜೈಸನ್ ಥಾಮಸ್ ಭಾಗವಹಿಸಿದ್ದರು. ಅಲ್ಲದೇ ಜೇಸಿ ವೃತ್ತದ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಾದ ರಾಮಚಂದ್ರ ಹೆಬ್ಬಾರ್ ಇವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಯ ಸದಾನಂದ ಹಾಗೂ ಕಳಸ ಉಪ ವೃತ್ತ ನಿರೀಕ್ಷಕರಾದ ಹರ್ಷವರ್ಧನ್ ಹಾಜರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಕಳಸ ಜೇಸಿಐ ಘಟಕದ ಅಧ್ಯಕ್ಷರಾದ ಜೇಸಿ ಪ್ರಶಾಂತ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳಾದ ರಾಮಚಂದ್ರ ಹೆಬ್ಬಾರ್ ಹಾಗೂ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಜೈಸನ್ ತಾಮಸ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ 14 ರ ಅಧ್ಯಕ್ಷರಾದ ಜೇಸಿ ಕುನಾಲ್ ಮಾನಕ್ ಚಂದ್ ಹಾಗೂ ವಲಯ 14 ರ A ವಿಭಾಗದ ವಲಯ ಉಪಾಧ್ಯಕ್ಷರಾದ ಜೇಸಿ ಮಾಯ ಗಿರೀಶ್ ಹಾಗೂ ಕಳಸ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಅಶೋಕ್ ಆರ್ ಜಾವಳಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಜೇಸಿ ಮಹೇಶ್ ಕೆ.ಸಿ ಹಾಗೂ ಕಳಸ ಜೆಸಿಐ ಘಟಕದ ಕಾರ್ಯದರ್ಶಿಗಳಾದ ಜೇಸಿ ಶ್ರೀಕಾಂತ್ ಉಪಸ್ಥಿತರಿದ್ದರು…