ಬಾಳೆಹೊನ್ನೂರಿನಿಂದ ಕಳಸಕ್ಕೆ ಬರುವ ಖಾಸಾಗಿ ಬಸ್ಸಿನ ಬ್ರೇಕ್ ಪೈಲ್ ಆದ ಹಿನ್ನಲೆಯಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ದುರಂತವೊಂದು ತಪ್ಪಿದಂತಾಗಿದೆ.
ಇಂದು ಬೆಳಿಗ್ಗೆ 8.45ರ ಸುಮಾರಿಗೆ ಖಾಸಾಗಿ ಬಸ್ಸು ಸಂಪಿಗೆ ಕಟ್ಟೆ ಸಮೀಪ ಬಸ್ಸು ಬ್ರೇಕ್ ಪೈಲ್ ಆಗುತ್ತಿದ್ದಂತೆ ಚಾಲಕ ಸುನೀಲ್ ಬಸ್ಸನ್ನು ನಿಯಂತ್ರಣಕ್ಕೆ ತಂದು ಚರಂಡಿಗೆ ಇಳಿಸಿದ್ದಾರೆ.ಬಸ್ಸು ಸ್ವಲ್ಪ ಮುಂದೆ ಹೋಗಿದ್ದರೂ ರಸ್ತೆಯಿಂದ ಕೆಳಗೆ ಬೀಳುವ ಸಂದರ್ಭ ಇತ್ತು.ಅಲ್ಲದೆ ಬಸ್ಸಿನ ಎದುರು ಭಾಗದಲ್ಲಿ ಇನ್ನೊಂದು ಶಾಲಾ ವಾಹನವೂ ಮಕ್ಕಳನ್ನು ಬಸ್ಸಿಗೆ ಹತ್ತಿಸುತ್ತಿದ್ದರು.ಈ ಬಸ್ಸಲ್ಲಿ ಕಳಸÀಕ್ಕೆ ಬರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿ 50 ಕ್ಕೂ ಹೆಚ್ಚು ಜನ ಇದ್ದರು.
ಆದರೆ ಯಾರಿಗೂ ತೊಂದರೆಯಾಗದಂತೆ ಬಸ್ಸನ್ನು ನಿಯಂತ್ರಣಕ್ಕೆ ತಂದ ಚಾಲಕ ಸುನೀಲ್ ಚರಂಡಿಗೆ ಇಳಿಸಿದ ಪರಿಣಾಮ ಅನಾಹುತವನ್ನು ತಪ್ಪಿಸಿದ್ದಾರೆ.ಇವರ ಸಮಯ ಪ್ರಜ್ಞೆ ಸಾರ್ವಜನಿಕರಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ.