ಚಿತ್ರ ನಿರ್ಮಾಪಕ ಬಿ.ವಿ.ರವಿ ರೈಗೆ ಕಳಸ ಆಟೋ ಚಾಲಕ ಮತ್ತು ಮಾಲಿಕರ ಸಂಘದಿಂದ ಸನ್ಮಾನ ಮಾಡಿದರು.
ಆಟೋ ಚಾಲಕ ಮತ್ತು ಮಾಲಿಕರ ಸಂಘದಿಂದ ಆಯೋಜಿದ್ದ 75 ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ರವಿ ರೈಯವರನ್ನು ಗೌರವಿಸಿದರು.
ಬಿ.ವಿ.ರವಿ ರೈ ರವರು ಕೇವಲ ಚಿತ್ರ ನಿರ್ಮಾಪಕರಲ್ಲದೆ,ರಾಜಕೀಯ,ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ.ಆಟೋ ಚಾಲಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ನಮಗೆ ಸಾಕಷ್ಟು ಸಂದರ್ಭದಲ್ಲಿ ನೆರವಾಗಿದ್ದಾರೆ.ಆದ್ದರಿಂದ ಅವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಆಟೋ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಜಗದೀಶ್ ಭಟ್ ಹೇಳಿದರು.