ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಕಳಸ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ದಂಪತಿಗಳನ್ನು ಗೌರವಿಸಲಾಯಿತು.
ಮುನ್ನೂರುಪಾಲಿನ ಶ್ರೀ ಮಹಾಲಕ್ಷ್ಮೀ ಮತ್ತು ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ ಎ.ಟಿ.ವಿಜಯಕುಮಾರ್ ರವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯರಂಗ ಕೋಟೆತೋಟ, ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಗುಡೇತೋಟ, ಕಳಸ ಸೌಹಾರ್ದ ಸಹಕಾರ ಅಧ್ಯಕ್ಷರಾದ ಜಿ.ಕೆ.ಮಂಜಪ್ಪಯ್ಯ, ಶಾರದ ಸೌಹಾರ್ದ ನಿರ್ದೇಶಕರಾದ ಉದಯಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಶುಭಾಕರ, ಯುವ ಬಳಗದ ಅಧ್ಯಕ್ಷರಾದ ಸುಮಂತ್, ದೇವಸ್ಥಾನದ ಅಧ್ಯಕ್ಷರಾದ ದಿನಕರ, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶಾರದಮ್ಮ ಭಾಗವಹಿಸಿದ್ದರು.
ಮಹಾಲಕ್ಷ್ಮೀ ಅಮ್ಮನವರಲ್ಲಿ ಶ್ರೀ ದೇವಿ ಪಾರಾಯಣ ಮತ್ತು ಶ್ರೀ ಮಹಾಗಣಪತಿ ದೇವರಲ್ಲಿ ಶ್ರೀ ಸತ್ಯಗಣಪತಿ ವ್ರತ ನೆರವೇರಿತು. ಘಟಕದ ಮಹಿಳಾ ಸದಸ್ಯರು ಸೌಂದರ್ಯ ಲಹರಿ, ಲಲಿತಾಸಹಸ್ರನಾಮ,
ವಿಷ್ಣುಸಹಸ್ರನಾಮವನ್ನು ಪಠಿಸಿದರು.
ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ದಿವಂಗತ ನಾಗೇಶರಾವ್ ಅತ್ತೀಕುಡಿಗೆ ಸ್ಮರಣಾರ್ಥ ಅವರ ಮಕ್ಕಳಾದ ಉದಯಕುಮಾರ್ ಮತ್ತು ಕೃಷ್ಣಮೂರ್ತಿ ಲಕ್ಷ್ಮೀ ವೆಂಕಟರಮಣಸ್ವಾಮಿ ಪ್ರಸಾದ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ವಕೀಲರಾದ ಜಿ.ಬಿ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಹೊಸಮನೆ ವಂದಿಸಿದರು.