ಕಳಸ ತಾಲ್ಲೂಕು ಕೇಂದ್ರ ಆದ ನಂತರದಲ್ಲಿ ಮೊದಲನೆ ಬಾರಿಗೆ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ತಾಲ್ಲೂಕು ಆಡಳಿತದಿಂದ ನಡೆಸಲಾಯಿತು.
ಇಲ್ಲಿನ ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ತಾಲ್ಲೂಕು ದಂಡಾಧಿಕಾರಿ ನಂದಕುಮಾರ್ ನೆರವೇರಿಸಿದರು.ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಜೆಇಎಂ, ಪದವಿ ಕಾಲೇಜು ಸ್ಕೌಟ್ಸ್ ತಂಡ ಮತ್ತು ವಿವಿಧ ಶಾಲಾ ಮಕ್ಕಳ ಗೌರವ ವಂದನೆಯನ್ನು ತಹಶೀಲ್ದಾರ್ ಸ್ವೀಕರಿಸಿದರು.ಸಂಗೊಳ್ಳಿ ರಾಯಣ ಮಹಾತ್ಮ ಗಾಂಧಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
10ನೇ ತರಗತಿ ಮತ್ತು ಪಿಯುಸಿಯಲ್ಲಿ ತಾಲ್ಲೂಕಿಗೆ ಅಗ್ರಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಶಾಲಾ ಕಾಲೇಜುಗಳಿಗೆ ನಡೆಸಿದ್ದ ವಿವಿಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕøತಿಕ ಪ್ರದರ್ಶನ ನಡೆಯಿತು.
ಅಚ್ಚು ಕಟ್ಟಾಗಿ ನಡೆದ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾದವು.
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ,ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್,ಸಬ್ಇನ್ಸ್ಪರಕ್ಟರ್ ಹರ್ಷವರ್ಧನ್, ಉಪತಹಶೀಲ್ದಾರ್ ಹೇಮಂತ್,ರೆವಿನ್ಯೂ ಇನ್ಸ್ಪೆಕ್ಟರ್ ಅಜ್ಜೇಗೌಡ,ಉಪ ಪ್ರಾಂಶುಪಾಲ ಶಿವಕುಮಾರ್ ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು, ಇಲಾಖೆಯ ಅಧಿಕಾರಿಗಳು,ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಇದ್ದರು.