ತಾಲ್ಲೂಕಿನ ಕಲ್ಮಕ್ಕಿ, ನೆಲ್ಲಿಕೆರೆ, ನೆಲ್ಲಿಬೀಡು, ಜಾಂಬಳೆಯಲ್ಲಿ ಸ್ವಾತಂತ್ರೊತ್ಸವದ ಪ್ರಯುಕ್ತ ಶ್ರಮದಾನವನ್ನು ಮಾಡಲಾಯಿತು.
ಕಲ್ಮಕ್ಕಿಯಲ್ಲಿ ಒಕ್ಕೂಟದ ಸದಸ್ಯರಿಂದ ಕಳಸದ ಕೈಮರದಿಂದ ಕಲ್ಮಕ್ಕಿವರೆಗೆ ರಸ್ತೆ ಎರಡೂ ಬದಿ ಸ್ವಚ್ಚತೆಗೊಳಿಸಲಾಯಿತು.
ನೆಲ್ಲಿಕೆರೆ ಅಂಗನವಾಡಿ ಸಮೀಪ ಗಿಡ ಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ತೆಗೆದು ಶುಚಿಗೊಳಿಸಿ ಸ್ವಾತಂತ್ರೋತ್ಸವಕ್ಕೆ ತಯಾರು ಮಾಡಲಾಯಿತು.
ನೆಲ್ಲಿಬೀಡು ಜಾಂಬಳೆಯಲ್ಲಿ ಕನ್ನಡ ಜ್ಯೋತಿ ಯುವಕ ಸಂಘದ ಜೊತೆಗೂಡಿ ಸಮುದಾಯ ಭವನ, ಶಾಲಾ ಆವರಣವನ್ನು ಸ್ವಚ್ಚಗೊಳಿಸಲಾಯಿತು.