ರಾಷ್ಟ್ರೀಯತೆ ಹೆಮ್ಮೆ ಯನ್ನು ಹುಟ್ಟು ಹಾಕಿ ಬದಲಾವಣೆಯ ವೇಗ ವರ್ಧಕ ವಾಗಿರಿ ಮತ್ತು ಭಾರತೀಯರಾಗಿರಲು ಹೆಮ್ಮೆ ಪಡಿ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ. ಆರ್ ಮೋಹನ್ ಕುಮಾರ್ ಹೇಳಿದರು.
ಅವರು ಇಂದು ಕಳಸ ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಬ್ಯಾಡ್ಜ್ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಮಾನಸದಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಆಚರಿಸುತ್ತಿದ್ದೇವೆ. ಎಲ್ಲರೂ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿ ಕೊಳ್ಳಬೇಕು ಹಾಗೂ ಪ್ರತಿವರ್ಷವೂ ಇದೆ ಉತ್ಸಹದಿಂದ ಸ್ವಾತಂತ್ರ್ಯ ದಿನವೂ ಆಚರಿಸೋಣ ಎಂದರು.
ನಾವೀಗ ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳ ಸಂಭ್ರಮದಲ್ಲಿದ್ದೇವೆ ಆದ್ದರಿಂದ ನಮ್ಮ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಇಡೀ ವರ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ 75ಸ್ವಾತಂತ್ರ್ಯ ಹೋರಾಟಗಾರರನ್ನು ವಿದ್ಯಾರ್ಥಿಗಳಿಗೆ ಮತ್ತು ಈ ಸಮಾಜಕ್ಕೆ ಪರಿಚಯಿಸುವ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಅಮೃತ ಸ್ವಾತಂತ್ರ್ಯ ಮಹೋತ್ಸಹಕ್ಕೆ ಸಾಕ್ಷಿಕರಿಸುತ್ತೇನೆ ಎಂದರು.
ಕಳಸ ಪಬ್ಲಿಕ್ ಶಾಲೆ ಶಿಕ್ಷಕ ಹೆಚ್.ಎನ್ ಶಿವಕುಮಾರ್ ಮಾತನಾಡಿ ಭಾರತವು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಹೊಂದಿ ಎಪ್ಪತೈದು ವರ್ಷಗಳು ಗತಿಸಿದವು ಇವತ್ತು ನಾವು ಮಾತನಾಡುವ ಸ್ವಂತ ವಿಚಾರ ಧಾರೆಗಳನ್ನು ಹಂಚಿ ಕೊಳ್ಳುವ ಅಪೇಕ್ಷೆಯಂತೆ ಬದುಕುವ ಸ್ವಾತಂತ್ರ್ಯವನ್ನು ಯಥೇಚ್ಛವಾಗಿ ಅನುಭವಿಸು ತ್ತಿದ್ದೇವೆ ನಮ್ಮ ಸ್ವಾತಂತ್ರ್ಯ ಸೇನಾನಿಗಳು. ನೇತಾರರ ತ್ಯಾಗ,ನೋವು,ಸಂಘರ್ಷ,ರಕ್ತ ಬೆವರುಗಳೇ ಇದಕ್ಕೆ ಕಾರಣ ಆದ್ದರಿಂದ ಪ್ರತಿಯೊಬ್ಬರು ದೇಶಾಭಿಮಾನ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ,ವೀಣಾಶಣೈ,ನಗ್ಮಾಬಾನು,ನಾಗರತ್ನ,ರೇಖಾ,ಎಸ್.ಹೆಚ್.ಪುರುಶೋತ್ತಮ, ಲಲಿತ, ರಂಜಿತ್ ,ಶ್ರೀದೇವಿ,ಶೈಲಾ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು .