ಸ್ವತಂತ್ರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಸರಿಕಲ್ ಒಕ್ಕೂಟದ ಸದಸ್ಯರಿಂದ
ಸ್ವಚ್ಛತೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಸರಿಕಲ್ ಶಾಲೆಯ ಸುತ್ತಲೂ ಬೆಳೆದಂತಹ ಗಿಡ ಗಂಟೆಗಳನ್ನು ಕಳೆ ಹೊಡೆಯುವ ಯಂತ್ರಗಳಿಂದ ಕತ್ತರಿಸಿ ಸ್ವಚ್ಛಗೊಳಿಸಲಾಯಿತು. ಒಕ್ಕೂಟದ ಸದಸ್ಯರು ಹಾಗೂ ಶೌರ್ಯ ಸ್ವಯಂಸೇವಕರು ಸಭಾಭವನ ಮತ್ತು ಶಾಲಾ ಆವರಣ ಸ್ವಚ್ಛಗೊಳಿಸಿ ಕೊಡಲಾಯಿತು. ಹಾಗೂ ಸುಮಾರು ಒಂದು ಎಕರೆ ಜಾಗಕ್ಕೆ ಸಂಪೂರ್ಣ ತಂತಿಬೆಲಿಯನ್ನು ನಿರ್ಮಿಸಿ ಕೊಡಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ತನಕ 22 ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಶಿವರಾಜ್ , ಕೃಷಿ ಮೇಲ್ವಿಚಾರಕರಾದ ದಿನೇಶ್ , ಸೇವಾ ಪ್ರತಿನಿಧಿ ಆದ ವಿನುತಾ, ಒಕ್ಕೂಟ ಅಧ್ಯಕ್ಷರಾದ ಸತೀಶ್, ಹಾಗೂ ಒಕ್ಕೂಟದ ಸದಸ್ಯರು 20ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಶೌರ್ಯ ಸಂಯೋಜಕರಾದ ಬಿಕೆ.ಮಹೇಶ್, ಸದಸ್ಯರಾದ ಮಂಜುನಾಥ್, ದಿವಾಕರ, ಸತೀಶ್, ಇದ್ದರು. ವಿದ್ಯಾ ಗಣಪತಿ ಯುವಕ ಸಂಘದ ಸದಸ್ಯರು ಕೂಡ ಭಾಗವಹಿಸಿದ್ದರು.