ಕಳಸ ಗ್ರಾಮ ಪಂಚಾಯಿತಿಯಲ್ಲಿ ಕಳೆದ 19 ವರ್ಷಗಳಿಂದ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ ಅವರು ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದಾರೆ.
2003ರಲ್ಲಿ ಕಳಸ ಪಂಚಾಯಿತಿಗೆ ಗುಮಾಸ್ತರಾಗಿ ಸೇರ್ಪಡೆಗೊಂಡಿದ್ದ ಇವರು ಎಲ್ಲರಿಗೂ ಅಚ್ಚುಮೆಚ್ಚಿನ ಚಂದ್ರಣ್ಣ ಆಗಿದ್ದರು.ಸುಧೀರ್ಘ 19 ವರ್ಷಗಳ ಕಾಲ ಒಂದೇ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಬಡ್ತಿ ಹೊಂದಿ ಅಜ್ಜಂಪುರ ತಾಲ್ಲೂಕಿನ ನಾರಾಣಾಪುರ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಗೊಂಡಿದ್ದಾರೆ.