ಕಳಸ-ಹೊರನಾಡು ರಸ್ತೆಯ ವೆಂಕಟರಮಣ ದೇವಸ್ಥಾನದ ಹತ್ತಿರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದ ಗಿಡ ಗಂಟಿಗಳನ್ನು ಕಡಿದು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಜೋರಾದ ಗಾಳಿ ಮಳೆಗೆ ಭೂಕುಸಿತ ಉಂಟಾಗಿ ಸಣ್ಣ ಸಣ್ಣ ಮರಗಳೊಂದಿಗೆ ಗಿಡ ಗಂಟಿಗಳು ರಸ್ತೆಗೆ ಬಂದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.
ಇದನ್ನು ಅರಿತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಅಶೋಕ್ ಪೂಜಾರಿ,ಸ್ವಯಂ ಸೇವಕರಾದ ಮಂಜುನಾಥ್,ಸುದೀಪ್,ಮೃತ್ಯುಂಜಯ ರಸ್ತೆಗೆ ಬಿದ್ದದ್ದ ಗಿಡಗಂಟಿಗಳನ್ನು ಕಡಿದು ತೆರವು ಮಾಡಿದರು.