- ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಮಳೆಯಾಗಿದ್ದು ಮಳೆಯಿಂದ ಬೆಳೆ ಹಾನಿಗಳು ಉಂಟಾಗಿದ್ದು ಅದಕ್ಕಾಗಿ ಶೀಘ್ರದಲ್ಲೇ ಬೆಲೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಕಂದಾಯ ಸಚಿವ ಆರ್ ಅಶೋಕ್ ಗೆ ಮನವಿ ಸಲ್ಲಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದ ಈ ಭಾಗದ ರೈತಾಪಿ ವರ್ಗದವರುಗಳು ಬೆಳೆದ ಬೆಳೆಯಲ್ಲವೂ ನೀರಿನಲ್ಲಿ ಮುಳುಗಿ ಕೋಟ್ಯಾಂತರ ರೂ.ಗಳು ನಷ್ಟವಾಗಿದ್ದು, ಇದರಿಂದ ರೈತಾಪಿ ವರ್ಗದವರುಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಇವರುಗಳೆಲ್ಲರಿಗೂ ಸರ್ಕಾರದ ವತಿಯಿಂದ ಬೆಳೆ ಪರಿಹಾರವನ್ನು ಮಂಜೂರು ಮಾಡುವುದು ಆಗತ್ಯವಾಗಿರುವ ಪ್ರಯುಕ್ತ ಈ ಭಾಗದ ರೈತಾಪಿ ವರ್ಗದವರುಗಳಿಗೆ ಆಡಷ್ಟು ವೇಗನೇ ಬೆಳೆ ನಷ್ಟ ಪರಿಹಾರವನ್ನು ಮಂಜೂರು ಮಾಡಲು ಆದೇಶ ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ರೈತರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.