ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡುಗದ ಮನೆ ಗ್ರಾಮಕ್ಕೆ ತೆರಳುವ ಕಾಲು ಸೇತುವೆ ಕುಸಿದು ಹೋಗಿದೆ.
ಈ ಗ್ರಾಮಕ್ಕೆ ತೆರಳುವ ನಡೆಯುತ್ತಿರುವ ಹೊಸ ಸೇತುವೆಯ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.ಇರೋ ಏಕೈಕ ಕಾಲು ಸೇತುವೆಯನ್ನು ಗ್ರಾಮಸ್ಥರು ನೆಚ್ಚಿಕೊಂಡಿದ್ದರು.
ಆದರೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾಲು ಸೇತುವೆಯು ಕುಸಿದು ಹೋಗಿದೆ.ತಾತ್ಕಾಲಿಕವಾಗಿ ಗ್ರಾಮಸ್ಥರು ಮರದ ದಬ್ಬೆಗಳನ್ನು ಕಟ್ಟಿ ಅದರ ಮುಖಾಂತರ ಹಳ್ಳವನ್ನು ಅಪಾಯಕಾರಿ ಸ್ಥಿತಿಯಲ್ಲಿ ದಾಟುತ್ತಿದ್ದಾರೆ.