ಕಲ್ಲುಗೋಡು ಗ್ರಾಮದ ಕಳಸ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು,ತಾತ್ಕಾಲಿಕವಾಗಿ ದುರಸ್ಥಿ ಮಾಡಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಸ್ಥೆ ಮಧ್ಯ ಭಾಗದಲ್ಲಿ ದೊಡ್ಡದಾದ ಗುಂಡಿಗಳಾಗಿ,ಮೇಲ್ಬಾಗದಲ್ಲಿ ಪೂರ್ತಿಯಾಗಿ ಮಣ್ಣು ಆವರಿಸಿದೆ.ಕಳೆದ ಮೂರು ವಾರಗಳ ಹಿಂದೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಯಾವುದೇ ವಾಹನಗಳು ಕೂಡ ಹೋಗದೆ ಇರುವ ಸ್ಥಿತಿ ನಿರ್ಮಾಣ ಆಗಿದೆ.
ದಯವಿಟ್ಟು ಅಧಿಕಾರಿಗಳು ತಕ್ಷಣ ತಾತ್ಕಾಲಿಕವಾಗಿ ಗ್ರಾವೆಲ್ ಹಾಕಿ ದುರಸ್ಥಿ ಮಾಡಿಕೊಡಿ ಎಂದು ಕಲ್ಲುಗೋಡು ಗ್ರಾಮಸ್ಥರು ಒತ್ತಾಯಿಸಿದ್ದಾರೆ.