ಕನ್ನಡ ಸಾಹಿತ್ಯ ಪರಿಷತ್ತು ಕಳಸ ತಾಲ್ಲೂಕು ಘಟಕ ಮತ್ತು ಹೋಬಳಿ ಘಟಕದ ವತಿಯಿಂದ ಸಾಹಿತ್ಯ ಶ್ರಾವಣ ಸಂಜೆ ಕಾರ್ಯಕ್ರಮ ಬುಧವಾರ ನಡೆಯಿತು.
ಕಳಸ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಸಾಹಿತಿಗಳಾದ ಅ.ರಾ.ರಾಧಕೃಷ್ಣ, ಪಾಂಡುರಂಗ, ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ,ಹೋಬಳಿ ಕಾರ್ಯದರ್ಶಿ ಪ್ರೇಂ ಕುಮಾರ್,ಮರಸಣಿಗೆ ಘಟಕದ ಅಧ್ಯಕ್ಷ ಕೃಷ್ಣೇ ಗೌಡ ಸ್ವರಚಿತ ಕವನ ವಾಚನ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕಳಸ ಗ್ರಾಮ ಪಂ ಅಧ್ಯಕ್ಷೆ ಸುಜಯ ಸದಾನಂದ,ಪದವಿ ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಇದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸುಚಿತ್ರ ಶೆಟ್ಟಿ,ನಿರೂಪಣೆಯನ್ನು ಸುಮನಾ ಜಯರಾಜ್,ವಂದನಾರ್ಪಣೆಯನ್ನು ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ ಮಾಡಿದರು.