ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರವಿ ಕಳಕ್ಕೋಡು ಆಯ್ಕೆಯಾಗಿದ್ದಾರೆ.
ಕಳೆದ ವಾರ ಹಿಂದಿನ ಅಧ್ಯಕ್ಷ ಶ್ರೇಯಂಸ ಕುಮಾರ್ ಅವರ ಪದಚ್ಯುತಿ ನಡೆದ ನಂತರ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರವಿ ಕಳಕ್ಕೋಡು ಮತ್ತು ಅದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಶಂಕರೇ ಗೌಡ ನಾಮ ಪತ್ರ ಸಲ್ಲಿಸಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಬೆಂಬಲಿಸಿದ ಪರಿಣಾಮ ರವಿ ಕಳಕ್ಕೋಡು ಅವರಿಗೆ 9ಮತಗಳು, ಮತ್ತು ಶಂಕರೇಗೌಡ ಅವರು 3 ಮತಗಳನ್ನು ಪಡೆದಿದ್ದರು.ಮೂವರು ಸದಸ್ಯರು ಮತ ಹಾಕಲು ಗೈರು ಹಾಜರಾದರು.
ಅಧ್ಯಕ್ಷರಾಗಿ ಅಧಿಕಾರ ಪಡೆದ ರವಿ ಕಳಕ್ಕೋಡು,ನಾನು ಬಿಜೆಪಿ ಮತ್ತು ಕಾಂಗ್ರೆಸ್ನ ಬೆಂಬಲಿತ ಅಭ್ಯರ್ಥಿ ಎಂದು ಕಳಸ ಲೈವ್ ಜೊತೆ ಹೇಳಿಕೊಂಡಿದ್ದಾರೆ.
15 ಸದಸ್ಯರನ್ನು ಒಳಗೊಂಡ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 5, ಬಿಜೆಪಿ ಬೆಂಬಲಿತ 2 ಸದಸ್ಯರು ಇದ್ದಾರೆ.
ಚುನಾವಣೆ ನಂತರದ ನಡೆದ ಅಭಿನಂದನಾ ಸಭೆಯಲ್ಲಿ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ,ಜ್ವಾಲನಯ್ಯ,ಆಶಾಲತಾಜೈನ್,ಬ್ರಹ್ಮದೇವ,ಬಿಜೆಪಿ ಕಳಸ ಅಧ್ಯಕ್ಷ ನಾಗಭೂಷನ್, ಬಿಜೆಪಿ ಮುಖಂಡರಾದ ಗಿರೀಶ್ ಹೆಮ್ಮಕ್ಕಿ,ಬಿ.ಕೆ.ಮಹೇಶ್, ಉದಯ,ಕಾಂಗ್ರೇಸ್ ಮುಖಂಡರಾದ ಶ್ರೇಯಂಸ ಕುಮಾರ್,ಪ್ರವೀಣ್,ಶ್ರೀನಿವಾಸ,ಸುಜಿತ್ ಇದ್ದರು.