ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ ಸ್ಥಾನಕ್ಕೆ ರವಿ ಕಳಕ್ಕೋಡು ಮತ್ತು ಶಂಕರೇಗೌಡ ನಾಮ ಪತ್ರ ಸಲ್ಲಿಸಿದ್ದಾರೆ.
ಕಳೆದ ವಾರ ಹಿಂದಿನ ಅಧ್ಯಕ್ಷ ಶ್ರೇಯಂಸ ಕುಮಾರ್ ಅವರ ಪದಚ್ಯುತಿ ನಡೆದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು ನಡೆಯಲಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರವಿ ಕಳಕ್ಕೋಡು ಮತ್ತು ಅದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಶಂಕರೇ ಗೌಡ ಕೂಡ ನಾಮ ಪತ್ರ ಸಲ್ಲಿಕೆ ಮಾಡಿದ್ದು, ಮದ್ಯಾಹ್ನ ಮೂರು ಗಂಟೆಗೆ ಬರುವ ಪಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
15 ಸದಸ್ಯರು ಇರುವ ಸಂಸೆ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ8, ಕಾಂಗ್ರೆಸ್ ಬೆಂಬಲಿತ 5, ಬಿಜೆಪಿ ಬೆಂಬಲಿತ 2 ಸದಸ್ಯರು ಇದ್ದಾರೆ.