ಕಳಸ-ಹೊರನಾಡು ಮುಖ್ಯ ರಸ್ತೆಯ ಬಸ್ರಿಮಕ್ಕಿ ತಿರುವುನಲ್ಲಿ ರಸ್ತೆಗೆ ಹೊಂದಿಕೊಂಡ ಧರೆ ಕುಸಿಯುತ್ತಿದೆ.
ಕಳೆದ ಕೆಲ ದಿನಗಳಿಂದ ಇಲ್ಲಿ ಧರೆ ಕುಸಿಯುತ್ತಿದ್ದು, ರಸ್ತೆಗೆ ಹಾನಿಯಾಗುತ್ತಿದೆ.ತಿರುವಿನಲ್ಲಿ ಆಗಿರುವ ಈ ಹಾನಿಯಿಂದ ವಾಹನ ಸವಾರರ ಗಮನಕ್ಕೆ ಇದು ಬರುತ್ತಿಲ್ಲ.ಇಲ್ಲಿ ಯಾವುದೇ ರೀತಿಯ ಸೂಚನೆಯನ್ನು ನೀಡುವ ಫಲಕವನ್ನು ಹಾಕಲಿಲ್ಲ
.
ಇಲ್ಲಿ ಅವಘಡ ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.