ಕಳಸದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಕಲಶೇಶ್ವರ ದೇವಸ್ಥಾನದ ತಡೆಗೋಡೆ ಕುಸಿತಗೊಂಡಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೆ ದೇವಸ್ಥಾನದ ತಡೆಗೋಡೆಯ ಒಂದು ಭಾಗ ಕುಸಿತಗೊಂಡಿತ್ತು.ಇದೀಗ ಇನ್ನೊಂದು ಭಾಗದಲ್ಲಿಯೂ ಕುಸಿತಗೊಂಡಿದೆ.
ದೇವಸ್ಥಾನದ ಸುತ್ತಲೂ ಹಲವಾರು ವರ್ಷಗಳ ಹಿಂದೆ ಕಟ್ಟಿದ ತಡೆಗೋಡೆಯ ಒಂದೊಂದೆ ಭಾಗ ಕುಸಿದು ಹೋಗುತ್ತಿದ್ದು ಆತಂಕ ಎದುರಾಗಿದೆ.