ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶನಿವಾರ ಆಚರಿಸಲಾಯಿತು.
ಪುರಾಣದ ಪ್ರಕಾರ ಲಕ್ಷ್ಮಿ ಯನ್ನು ಆರಾಧಿಸಿದರೆ ಮನೆಯಲ್ಲಿ ಧನಕನಕ ಐಶ್ವರ್ಯ ತುಂಬಿ ತುಳುಕಾಡುವುದು ಎಂಬ ನಂಬಿಕೆಯೊಂದಿಗೆ,
ಭೂಮಿತಾಯಿ ಹಾಗೂ ಸ್ತ್ರೀ ಯನ್ನು ಪೂಜಿಸುವ ನಮ್ಮ ದೇಶದಲ್ಲಿ ಅದರ ಸಲುವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಗುವುದು ಎಂದು ಹಬ್ಬದ ಆಚರಣೆ ಮತ್ತು ನಂಬಿಕೆಗಳ ಬಗ್ಗೆ
ಶ್ರೀಮತಿ ಜ್ಯೋತಿ ಅರುಣ್ ಪೈಯವರು ಮಾಹಿತಿ ನೀಡಿದರು.
ಮಂಡಳಿಯ ಸದಸ್ಯರಿಗೆ ಕೇಶ ವಿನ್ಯಾಸ ಸ್ಪರ್ಧೆ ನಡೆಸಲಾಯಿತು.
ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶೋಭಾ ದೇಸಾಯಿ,ಚಂಪ ಎಂ. ರಾವ್, ಮನೋರಾಧಿನಿ, ಮತ್ತು ಅತಿಥಿಯಾಗಿ ಶ್ರೀಮತಿ ನಿತ್ಯ ಸಂದೀಪ್ ಹಾಗೂ ವೀಣಾಶ್ರೀಯವರು ಭಾಗವಹಿಸಿದ್ದರು.