ಕಳಸ ಇನ್ನರ್ ವೀಲ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ರಕ್ತಹೀನತೆ ಕಾರಣ,ಲಕ್ಷಣಗಳು,ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಲಾಯಿತು
ಸಂಪನ್ಮೂಲ ವ್ಯಕ್ತಿಯಾಗಿ ಡಾ|ಮಾಳವಿಕಾ ಪ್ರಭು ಹೆಣ್ಣು ಮಕ್ಕಳಿಗೆ ಋತುಸ್ರಾವದ ಬಗ್ಗೆ ಮಾಹಿತಿ ನೀಡಿ,ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ 397 ಮಕ್ಕಳು ಪಾಲ್ಗೊಂಡರು.
ಇನ್ನರ್ ವೀಲ್ ಅಧ್ಯಕ್ಷೆ ಕವಿತಾ ಪ್ರಕಾಶ್,ಕಾರ್ಯದರ್ಶಿ ಸಂಧ್ಯಾ ರಿತೇಶ್ ಹಾಗೂ ಇನ್ನರ್ ವೀಲ್ ಸದಸ್ಯೆಯರು ಇದ್ದರು.