ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತ ಮತ್ತು ಕೋಟಿ ಕುಂಕುಮಾರ್ಚನೆ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ವರಮಹಾಲಕ್ಷ್ಮೀ ವ್ರತ ಕೋಟಿ ಕುಂಕುಮಾರ್ಚನೆ ಆರಂಭಗೊಂಡು ಮದ್ಯಾಹ್ನದವರೆಗೆ ನಡೆಯಿತು.
ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ದಂಪತಿಗಳು ಕುಟುಂಬಸ್ಥರು ಸೇರಿದಂತೆ ನೂರಾರು ಮಹಿಳೆಯರು ವ್ರತದಲ್ಲಿ ಪಾಲ್ಗೊಂಡರು.