ಕಳಸ ತಾಲ್ಲೂಕಿನಾಧ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಶುಕ್ರವಾರ ಸಂಜೆ ಮುಳುಗಡೆಗೊಂಡಿತ್ತು.
ಇದರಿಂದ ಕೆಲ ಗಂಟೆಗಳ ಕಾಲ ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಲಘು ವಾಹನಗಳು ಪರ್ಯಾಯ ರಸ್ತೆ ಹಳುವಳ್ಳಿ-ಹೊರನಾಡು ರಸ್ತೆಯನ್ನು ಬಳಸಿಕೊಂಡರೆ, ಘನ ವಾಹನಗಳು ನೀರು ಇಳಿಕೆಯಾಗುವ ವರೆಗೆ ನದಿ ಬದಿಯಲ್ಲಿ ಕಾಲ ಕಳೆಯುವಂತಾಯಿತು.