ಕರ್ನಾಟಕ ಜಾನಪದ ಪರಿಷತ್ತು ಕಳಸ ತಾಲ್ಲುಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಾನಪದ ತಜ್ಞ ಡಾ.ಎಚ್.ಎಲ್.ನಾಗೇಗೌಡರ ಬದುಕು ಬರಹ ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕ್ರತಿಕ ಕಸರ್ಯಕ್ರಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಗಿ ಬೀಸುವುದರ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ನೆರವೇರಿಸಿದರು.ಹಾಗೂ ದೀಪ ಬೆಳಗಿಸುವುದರ ಮೂಲಕ ಜೆಡಿಎಸ್ ರಾಜ್ಯ ಉಪಾದ್ಯಕ್ಷ ಹೆಚ್.ಡಿ.ಜ್ವಾಲನಯ್ಯ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ.ಮೋಹನ್ ರಾಜಣ್ಣ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಡಾ.ರಮ್ಯ ಎಚ್.ಬಿ ಪದಗ್ರಹಣ ಸ್ವೀಕರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಸುರೇಶ್,ಸಾಹಿತಿ ಶ್ರೀಮತಿವಾಣಿಚಂದ್ರಯ್ಯ ನಾಯ್ಡು, ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಕಾಲೇಜು ಕಾರ್ಯಧ್ಯಕ್ಷ ಪ್ರಸಿದ್ಧ ಜೈನ್,ಯಕ್ಷಗಾನ ಕಲಾವಿದರಾದ ಜ್ಯೋತಿ,ಕ.ಜಾ.ಪ ನಿಖಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಇದ್ದರು.