ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಬೂಸ್ಟರ್ ಡೋಸ್ ನೀಡಲು ಬುಧವಾರ ಚಾಲನೆ ನೀಡಲಾಯಿತು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಚಾಲನೆ ನೀಡಿದ್ದು,ವೈಧ್ಯರಾದ ಡಾ.ನಿಲೀಮ ಇದ್ದರು.
ಪ್ರತೀ ಬುಧವಾರ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಮತ್ತು ಪ್ರತೀ ಗ್ರಾಮಗಳಲ್ಲಿ ಆರೋಗ್ಯ ಕ್ಷೇಮ ಕೇಂದ್ರದ ಮೂಲಕ ವಾರಕ್ಕೊಂದು ದಿನದಂತೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಗ್ರಾಮಗಳಿಗೆ ಡೋಸ್ ನೀಡುವ ನಿರ್ದಿಷ್ಟ ದಿನದ ಮಾಹಿತಿಯನ್ನು ಆಯಾಯ ಭಾಗದ ಆಶಾಕಾರ್ಯಕರ್ತೆಯರ ಮೂಲಕ ನೀಡಲಾಗುತ್ತದೆ ಎಂದು ತಿಳಿಸಿದರು.