ಸತತ ಪರಿಶ್ರಮದಿಂದ ಸಾಧಕನಿಗೆ ಪ್ರತಿಫಲ ಕೊಡುತ್ತದೆ ಎನ್ನುವುದಕ್ಕೆ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ ಚೇತನ್.ಜಿ ಉತ್ತಮ ಉದಾಹರಣೆ.
ತನ್ನ ವೃತ್ತಿ ಡ್ರೈವಿಂಗ್ ಆದರೂ ಕೂಡ ಅದರ ಹೊರತು ಪಡಿಸಿ ತಾನೇನ್ನಾದರೂ ಸಾದಿಸಬೇಕೆಂಬ ಹಠದೊಂದಿಗೆ ಆತ ವಾಲಿದ್ದು ಮಾಡೆಲಿಂಗ್ ಕ್ಷೇತ್ರಕ್ಕೆ.
ಬಡತನದಲ್ಲಿ ಹುಟ್ಟಿದರೂ ಕೂಡ ತನ್ನ ಪ್ರತಿಭೆಗೆ ಬಡತನ ಅಡ್ಡಿ ಬರಲಿಲ್ಲ.ತನ್ನಲ್ಲೊಂದು ಪ್ರತಿಭೆ ಇದೆ ಅದನ್ನು ಹೊರ ಜಗತ್ತಿಗೆ ತೋರಿಸಿಕೊಡಬೇಕೆಂಬ ಸತತ ಪ್ರಯತ್ನದ ಫಲ ಇಂದು ನಮ್ಮೂರಿನ ಚೆಲುವ ಚೇತನ್ ಮಾಡಲಿಂಗ್ ವಿಭಾಗದ ಫ್ಯಾಶನ್ ನಲ್ಲಿ ರಾಜ್ಯ ರತ್ನ ಪ್ರಶಸ್ತಿ ನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕಳಸ ತಾಲ್ಲೂಕಿನ ಕಲ್ಮಕ್ಕಿ ಗುರುರಾಜ್ ಮತ್ತು ನಾಗವೇಣಿ ದಂಪತಿಯ ಮಗನಾದ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲ್ಮಕ್ಕಿ ಶಾಲೆ ಹಾಗೂ ಪ್ರೌಢ ಮತ್ತು ಪ್ರಥಮ ಪಿಯುಸಿಯನ್ನು ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಗಿಸಿ,ನಂತರ ಸಂಸೆ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಮಾಡಿ ಜೀವನಕ್ಕಾಗಿ ಡ್ರೈವಿಂಗ್ ನ್ನು ಆಯ್ಕೆ ಮಾಡಿಕೊಂಡರು.
ಡ್ಯಾನ್ಸ್ ನಲ್ಲಿ ಸಾಕಷ್ಟು ಆಸಕ್ತಿ ಇದ್ದ ಚೇತನ್ ಗೆ ತನ್ನ ಗೆಳೆಯರೊಬ್ಬರ ಮಾತಿನಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.ತನ್ನ ಕೇಶ ವಿನ್ಯಾಸದಲ್ಲಿ ಗಮನ ಸೆಳೆಯುವ ಇವರ ಮೂರು ವರ್ಷದ ಸಾಧನೆ ಅಪಾರ.
ಕನ್ನಡಿಗ ಪಸ್ಟ್ ರನ್ನರ್ ಅಪ್ 2020,ಬೆಸ್ಟ್ ವಾಕ್ ಸೌತ್ 2020,ಬೆಸ್ಟ್ ಫೇಸ್ ಸೌತ್ 2020, ಪ್ಯಾಷನ್ ಲೀಗ್ ಇಂಡಿಯಾ 2021 ಸೀಸನ್ 3 ವಿನ್ನರ್,ಮಿಸ್ಟರ್ ಕರಿಸ್ಮಟಿಕೋ ಎಂಡ್ ಮಿಸ್ ಕರಿಸ್ಮಟಿಕ ಇಂಡಿಯ ಇಂಟರ್ ನ್ಯಾಷನಲ್ 2021 ಮಿಸ್ಟ್ ಹೆಲ್ದಿ ಹೇರ್ ಹಾಗೂ ಯಶ್ ಇಂಟರ್ನ್ಯಾಷನಲ್ ಪ್ಯಾಷನ್ ಅವಾರ್ಡ್ 2022 ರಾಜ್ಯ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮಾಡಲಿಂಗ್ ಕ್ಷೇತ್ರಕ್ಕೆ ಬರೀ ಶ್ರೀಮಂತರೆ ಹೋಗಬಹುದೆಂಬ ಮಾತನ್ನೇ ಸುಳ್ಳಾಗಿಸಿ, ಸಾಮಾನ್ಯರಿಗೂ ಮನಸ್ಸು ಮಾಡಿದರೆ ಅಲ್ಲಿ ಸಾಧನೆಯ ಗುರಿ ಮುಟ್ಟಬಹುದೆಂದು ತೋರಿಸಿಕೊಟ್ಟವರು ಚೇತನ್.
ಮಾಡಲಿಂಗ್ ಕ್ಷೇತ್ರದಲ್ಲಿನ ನನ್ನ ಆಸಕ್ತಿ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.ಮುಂದೆ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿಸುವ ಆಸಕ್ತಿ ಇದ್ದು, ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ ಚೇತನ್.
ಓರ್ವ ಸಾಮಾನ್ಯನಾಗಿ ಹುಟ್ಟಿ ತನ್ನ ಆಸಕ್ತಿ ಮೇಲಿನ ಸಾಧನೆಗಾಗಿ ಶ್ರಮ ವಹಿಸಿ ಸಾಧನೆಯ ಗುರಿಮುಟ್ಟಿ ಗೆಲುವಿನ ನಗೆ ಬೀರಿರುವ ಚೇತನ್ ಅವರ ಬದುಕು ಇನ್ನಷ್ಟು ಎತ್ತರದಲ್ಲಿ ಮಿಂಚುತ್ತಿರಲೆಂದು ಕಳಸ ಲೈವ್ ಹಾರೈಸುತ್ತಾ, ಇಂತಹ ಪ್ರತಿಭೆಗಳನ್ನು ಪರಿಚಯಿಸಲು ಹರ್ಷಿಸುತ್ತಿದ್ದೇವೆ.