ಮುನ್ನೂರ್ ಪಾಲ್ ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪ್ರತಿ ತಿಂಗಳ ಬಹುಳ ಚತುದರ್ಶಿಯಂದು ನಡೆಯುವ ಸಪ್ತಪತಿ ಪಾರಾಯಣದ ವಾರ್ಷಿಕ ಪಾರಾಯಣವು ನಾಳೆ(27-07-2022) ರಂದು ನಡೆಯಲಿದೆ.
ಈ ದಿನ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಇರುತ್ತದೆ.
ಈ ಪಾರಾಯಣವು ನಿರಂತರವಾಗಿ ನಡೆಯುತ್ತಿದ್ದು,ಈ ಸೇವೆಯಲ್ಲಿ ಪಾಲ್ಗೊಂಡವರು ಈ ವರೆಗೆ ತಮ್ಮ 24 ತಿಂಗಳ ಪಾರಾಯಣವು ಮುಗಿದಿದ್ದರೆ, ಮುಂದಿನ ಸೇವೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದಲ್ಲಿ ಅಥವಾ ಹೊಸದಾಗಿ ಸೇವೆಯಲ್ಲಿ ಸೇರ್ಪಡೆಗೊಳ್ಳಲು ಬಯಸಿದ್ದಲ್ಲಿ ಎರಡು ವರ್ಷದ ಪಾರಾಯಣದ ಬಾಬ್ತನ್ನು ಪಾವತಿಸಿ ಸೇವೆಯನ್ನು ಮುಂದುವರಿಸಲು ಆಡಳಿತ ಮಂಡಳಿ ತಿಳಿಸಿದೆ.