ಕಳಸ ಮುಖ್ಯ ರಸ್ತೆಯ ಪುಟ್ ಪಾತ್ಗೆ ಹಾಸಿದ್ದ ಕೆಲ ಚಪ್ಪಡಿಕಲ್ಲುಗಳು ತೆರೆದುಕೊಂಡು ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಕಳಸ ಗ್ರಾಮ ಪಂಚಾಯಿತಿ ಭಾನುವಾರ ರಾತ್ರಿ ಸರಿಪಡಿಸಿದೆ.
ಪುಟ್ ಪಾತ್ ನಲ್ಲಿ ಕೆಲ ಚಪ್ಪಡಿಕಲ್ಲುಗಳು ಬಾಯ್ದೆರೆದು ನಿಂತಿದ್ದವು. ಈ ಬಗ್ಗೆ ಸಾರ್ವಜನಿಕರ ದೂರಿನ ಅನ್ವಯ ಕಳಸ ಲೈವ್ ನಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿತ್ತು.ತೊಂದರೆಯನ್ನು ಗಮನಿಸಿದ ಪಂಚಾಯಿತಿ ಸಿಬ್ಬಂದಿಗಳು ರಾತ್ರಿಯೇ ಚಪ್ಪಡಿಯನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಯಸದಾನಂದ ಪ್ರತಿಕ್ರೀಯಿಸಿ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದ ಚಪ್ಪಡಿಕಲ್ಲುಗಳನ್ನು ಸರಿ ಪಡಿಸಲಾಗಿದೆ.ಅಲ್ಲದೆ ಇನ್ನು ಕೆಲವೆಡೆ ಕಲ್ಲುಗಳು ತುಂಡಾಗಿವೆ ಇದನ್ನು ಕೂಡ ಸರಿ ಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಯು ತಕ್ಷಣ ಕ್ರಮ ತೆಗೆದುಕೊಂಡಿರುವುದನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.