ಕಳಸ ಮುಖ್ಯ ರಸ್ತೆಯ ಎರಡೂ ಬದಿಯ ಪುಟ್ ಪಾತ್ಗೆ ಹಾಸಿರುವ ಕೆಲ ಚಪ್ಪಡಿಕಲ್ಲುಗಳು ಬಾಯಿ ತೆರೆದುಕೊಂಡಿದ್ದು, ಇದು ಪಾದಚಾರಿಗಳಿಗೆ ಕಂಟಕವಾಗಿ ಪರಿಣಮಿಸಿದೆ.
ಪ್ರತೀ ದಿನ ನೂರಾರು ವಿದ್ಯಾರ್ಥಿಗಳು,ವೃದ್ಧರು, ಮಹಿಳೆಯರು ಈ ಪುಟ್ ಪಾತ್ ಮೇಲೆ ಹೋಗುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಅಪಾಯ ಸಂಭವಿಸಬಹುದಾಗಿದೆ.
ಕಳಸ ಕೆನರಾ ಬ್ಯಾಂಕ್ ಸಮೀಪ ಈಗಾಗಲೇ ಇಬ್ಬರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.ಕೂಡಲೇ ಸಂಬಂದಪಟ್ಟವರು ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.