ಕಳಸದ ದೀಶಿತ್ ಜೈನ್ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಳಸದ ಯೋಗ ಶಿಕ್ಷಕ ಪ್ರೇಂ ಕುಮಾರ್ ಮತ್ತು ಭಾಗ್ಯ ದಂಪತಿಗಳ ಪುತ್ರ ಪಿ.ದೀಶಿತ್ ಜೈನ್ ಅವರು ನೀರಿನಲ್ಲಿ ವೃಕ್ಷ ಪದ್ಮಾಸನ ಹಾಕಿ ಅತೀ ಹೆಚ್ಚು ಸಮಯ ನೀರಿನಲ್ಲಿ ತೇಲುವ ಮುಖಾಂತರ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
2022ರ ಜೂನ್ 17ರಂದು 8 ನಿಮಿಷ 20 ಸೆಕೆಂಡುಗಳ ಕಾಲ ವೃಕ್ಷ ಪದ್ಮಾಸನ ಹಾಕಿ ನೀರಿನಲ್ಲಿ ತೇಲಾಡಿಕೊಂಡು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ದೀಶಿತ್ ಜೈನ್ ಕುದುರೆಮುಖದ ಗಿರಿಜ್ಯೋತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಹಾಸನದಲ್ಲಿ ಇಂಜಿನೀಯರಿಂಗ್ ಮುಗಿಸಿ, ಪ್ರಸ್ತುತ ತಮಿಳುನಾಡಿನ ಚೆನೈನಲ್ಲಿ ಇಂಜಿನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಬಗ್ಗೆ ಕಳಸ ಲೈವ್ ಜೊತೆ ಮಾತನಾಡಿದ ದೀಶಿತ್ ಜೈನ್ ತಂದೆ ಯೋಗ ಪಟು ಆಗಿರುವುದರಿಂದ ನನಗೂ ಯೋಗದಲ್ಲಿ ಆಸಕ್ತಿ ಇತ್ತು.ಐದು ವರ್ಷದಿಂದ ನೀರಿನಲ್ಲಿ ವೃಕ್ಷ ಪದ್ಮಾಸನ ಹಾಕಿ ಸತತ ಅಭ್ಯಾಸ ಮಾಡುತ್ತಿದ್ದೆ.ಇದರಿಂದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಾಧ್ಯವಾಯಿತು. ಮುಂದೆ ಗಿನ್ನಿಸ್ ವಲ್ರ್ಡ್ ರೇಕಾರ್ಡ್ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ದೀಶಿತ್ ಅವರಿಗೆ ನೀರಿನಲ್ಲಿ ಯೋಗ ಮಾಡುವ ಬಗ್ಗೆ ಅತ್ಯಂತ ಆಸಕ್ತಿ ಇತ್ತು.ಇದಕ್ಕೆ ನಾನು ಯಾವುದೇ ಅಡ್ಡಿ ಮಾಡಿರಲಿಲ್ಲ.ಶಿಕ್ಷಣಕ್ಕಾಗಿ ಹೊರ ರಾಜ್ಯಕ್ಕೆ ಹೋದರೂ ಕೂಡ ಅಲ್ಲಿ ಈ ಅಭ್ಯಾಸವನ್ನು ಮಾಡುತ್ತಿದ್ದ.ಇದರ ಪ್ರತಿಫಲವೇ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್.ಮಕ್ಕಳಿಗೆ ಯಾವುದರಲ್ಲಿ ಹೆಚ್ಚು ಪ್ರತಿಭೆ ಇದೆಯೋ ಅದಕ್ಕೆ ಪೋಷಕರು ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಉತ್ತಮ ಸಾಧಕರಾಗುತ್ತಾರೆ ಎಂದು ದೀಶಿತ್ ಜೈನ್ ತಂದೆ ಪ್ರೇಂ ಕುಮಾರ್ ಹೇಳುತ್ತಾರೆ.