ಕಳಸ-ಕೊಟ್ಟಿಗೆಹಾರ ಮುಖ್ಯ ರಾಜ್ಯ ಹೆದ್ದಾರಿಯ ಕಲ್ಮಕ್ಕಿ ಎಂಬಲ್ಲಿ ರಸ್ತೆಯ ಮಧ್ಯೆ ಕುಸಿದು ಹೋಗುತ್ತಿದ್ದು,ರಸ್ತೆ ಸಂಪರ್ಕ ಕಡಿತವಾಗುವ ಬೀತಿ ಎದುರಾಗಿದೆ.
ಇಲ್ಲಿ ಕಳೆದ ಎರಡು ವರ್ಷದ ಹಿಂದೆಯಷ್ಟೆ ಇದೇ ಸ್ಥಳದಲ್ಲಿ ರಸ್ತೆ ಕುಸಿದು ಹೋಗಿತ್ತು.ಅಲ್ಲಿ ಮೋರಿ ಅಳವಡಿಸಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.ಆದರೆ ಈಗ ಅದೇ ಸ್ಥಳದಲ್ಲಿ ರಸ್ತೆ ಮಧ್ಯೆ ಕಂದಕ ಸೃಷ್ಠಿಯಾಗಿದ್ದು,ರಸ್ತೆಯ ಒಂದು ಬದಿ ಕುಸಿಯಲು ಪ್ರಾರಂಬವಾಗಿದೆ.
ಇಲ್ಲಿ ಈ ಹಿಂದೆ ಕಾಮಗಾರಿ ಮಾಡುವಾಗಲೇ ನಾವು ಆಕ್ಷೇಪ ವ್ಯಕ್ತ ಪಡಿಸಿದ್ದೇವು.ಆದರೆ ಅಂದು ನಮ್ಮ ಮಾತನ್ನು ದಿಕ್ಕರಿಸಿ ಅವರಿಗೆ ಇಚ್ಚೆ ಬಂದ ರೀತಿ ಕಾಮಗಾರಿ ಮಾಡಿದರು.ಆದರೆ ಈಗ ರಸ್ತೆ ಕುಸಿಯುತ್ತಿದೆ.ಕೂಡಲೇ ಇಲ್ಲಿ ಕಾಮಗಾರಿ ಪ್ರಾರಂಬಿಸಿ ರಸ್ತೆ ಸರಿ ಪಡಿಸಿಕೊಡಬೇಕು ಇಲ್ಲವಾದರೆ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಕಲ್ಮಕ್ಕಿ ಗ್ರಾಮಸ್ಥರಾದ ವಸಂತ, ಅಜಯ್, ಪ್ರವೀಣ್,ರಘು, ಗಣೇಶ್ ಎಚ್ಚರಿಸಿದ್ದಾರೆ.