ಕಳಸ-ಹೊರನಾಡು ಮಧ್ಯೆ ಇರುವ ಹೆಬ್ಬಾಳೆ ಸೇತುವೆಯು ತುಂಬಿ ಹರಿಯುತ್ತಿದ್ದ ಸಂದರ್ಭದಲ್ಲಿ ಹಸುವೊಂದು ಸೇತುವೆಯ ಮೇಲೆ ನಡೆದುಕೊಂಡು ಬರುತ್ತಿರುವ ವಿಡಿಯೋ ತುಣುಕು ಸಖತ್ ವೈರಲ್ ಆಗುತ್ತಿದೆ.
ಕಳಸ ತಾಲ್ಲೂಕಿನಲ್ಲಿ ಅತಿಯಾದ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಹೆಬ್ಬಾಳೆಯ ಸೇತುವೆ ಮುಳುಗಿದೆ.ಈ ಸಂದರ್ಬದಲ್ಲಿ ಸೇತುವೆ ದಾಟಲು ಸಾದ್ಯವಾಗದೆ ಇರುವ ಹಿನ್ನಲೆಯಲ್ಲಿ ಸಾಕಷ್ಟು ವಾಹನಗಳು ರಸ್ತೆಯಲ್ಲಿ ನಿಂತು ನೀರಿನ ಪ್ರಮಾಣ ಕಡಿಮೆಯಾಗಲು ಕಾಯುತ್ತಿದ್ದಾರೆ.ಆದರೆ ಹಸುವೊಂದು ನೀರನ್ನು ಲೆಕ್ಕಿಸದೆ ಸೇತುವೆಯ ಮೇಲೆ ನಡೆದುಕೊಂಡು ಬರುತ್ತಿದೆ.
ಇದನ್ನು ಸ್ಥಳಿಯರು ವಿಡಿಯೋ ಮಾಡಿದ್ದು,ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದರ ವಿಡೀಯೋ ಕ್ಲಿಪ್ ನೋಡಲು ಕಳಸ ಲೈವ್ ಯೂಟ್ಯೂಬ್ ವೀಕ್ಷಿಸಿ