ಕಳಸ ತಾಲ್ಲೂಕಿನಾಧ್ಯಂತ ಮಳೆ ಮುಂದುವರೆದಿದ್ದು, ಮಳೆಯ ಅವಾಂತರಕ್ಕೆ ಕಾರಗದ್ದೆಯಲ್ಲಿ ಮನೆಯೊಂದು ಕುಸಿತಗೊಂಡಿದೆ.
ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಾರಗದ್ದೆ ಶುಶೀಲ ಎಂಬುವವರ ಮನೆ ಒಂದು ಭಾಗ ಕುಸಿತ ಗೊಂಡಿದೆ.ಅಡುಗೆ ಮನೆ ಸಂಪೂರ್ಣ ಜಖಂ ಗೊಂಡಿದ್ದು, ಮನೆಯ ಮೇಲ್ಚಾವಣಿಯೂ ಕುಸಿತಗೊಂಡಿದ್ದು, ಸಾಕಷ್ಟು ನಷ್ಟವುಂಟಾಗಿದೆ.
ಅದೃಷ್ಟವಶಾತ್ ಮನೆಯಲ್ಲಿ ಇದ್ದವರಿಗೆ ಯಾವುದೇ ರೀತಿಯ ಅಪಾಯ ಆಗಲಿಲ್ಲ.
ಸ್ಥಳಕ್ಕೆ ವಿಎ ಪ್ರಸನ್ನ, ಪಂಚಾಯಿತಿ ಅಧಿಕಾರಿ ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯ ಪಾಪಣ್ಣ, ಮಾಜಿ ತಾ.ಪಂ ಸದಸ್ಯ ಮಹಮ್ಮದ್ ರಫೀಕ್ ಬೇಟಿ ನೀಡಿದ್ದಾರೆ.