ಮಾನವೀಯತೆಯ ಮೌಲ್ಯ ಕಾಪಾಡುವಿನಲ್ಲಿ ಗುರು ವಿನ ಅಶ್ರೀವಾದ ಮುಖ್ಯ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ ಮೋಹನ್ ಕುಮಾರ್ ಹೇಳಿದರು.
ಅವರು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಹಾಗು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರವರು ಇಂದು ಗುರುಪೂರ್ಣಿಮೆ ಪ್ರಯುಕ್ತ ನಿವೃತ್ತ ಶಿಕ್ಷಕಿ ಶ್ರೀಮತಿ ಸುಲೋಚನಾ ರವರಿಗೆ ಅವರ ಮನೆಯಲ್ಲಿ ಸನ್ಮಾನಿಸಿ ಮಾತನಾಡಿದರು.
ಗುರುಗಳು ತಾಯಿಗೆ ಸಮಾನ. ಗುರು ಪೂರ್ಣಿಮೆ ಪವಿತ್ರ ದಿನದಂದು ಗುರುವಿನ ಶ್ರೇಷ್ಠತೆ. ಮಹಿಮೆಗಿಂತ ಅಧಿಕ ವಾದ ವಸ್ತು ಜಗತ್ತಿನಲ್ಲಿಲ್ಲ. ಮಾನವೀಯತೆಯ ಮೌಲ್ಯ ಕಾಪಾಡುವಲ್ಲಿ ಗುರುವಿನ ಅಶ್ರೀ ವಾದ ಅತೀ ಮುಖ್ಯ ಎಂದರು.
ಕಳಸ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕುಕ್ಕೋಡು ಗಣೇಶ್ ಮಾತನಾಡಿ ಅಜ್ಞಾನ ವೆಂಬ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನಡೆಗೆ ಸಾಗಿಸುವವನೇ ನಿಜವಾದ ಗುರು ಎಂದರು.
ಶಿಕ್ಷಕಿ ಶ್ರೀಮತಿ ರೇವತಿ ಶಿವಪ್ಪಮಾತನಾಡಿ ಸಾಮಾಜಿಕ ಬದುಕಿನಲ್ಲಿ ಎಲ್ಲರ ಜೀವನ ದಲ್ಲಿ ಗುರುವಿಗೆ ಮಹತ್ವ ಸ್ಥಾನವಿದೆ ಎಲ್ಲರ ಜೀವನ ದಲ್ಲಿ ಸಂಸ್ಕಾರ ಕೊಟ್ಟ ಗುರುವಿಗೆ ವಂದಿಸಿ ಈ ದೇಶ ಕ್ಕೆ ಬೆಳಕಾಗುವ ಮಾರ್ಗ ದಲ್ಲಿ ನೆಡೆಯೋಣ ಎಂದರು..
ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಸುಲೋಚನಾ,ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕಶಿವಪ್ಪ ಮಾತನಾಡಿದರು.
ಗಜೇಂದ್ರ. ಪೂಜಾ. ಲಕ್ಷ್ಮಣ. ಉಪಸ್ಥಿತರಿದ್ದರು.