ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ಚಿಕ್ಕೆಡ್ಲು ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಶ್ರೀಧರ್ ಪೂಜಾರಿ ಎಂಬುವವರ ಮನೆಯ ಮುಂಭಾಗದಲ್ಲಿ ಮುಖ್ಯ ರಸ್ತೆಯೇ ಬಿರುಕು ಕಾಣಿಸಿಕೊಂಡಿದ್ದು,ಇದರಿಂದ ಆಸುಪಾಸಿನ ಮನೆಗಳಿಗೂ ತೊಂದರೆಯಾಗುವುದಲ್ಲದೆ ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆ ಇದ್ದು, ಕೂಡಲೇ ಈ ಸ್ಥಳಕ್ಕೆ ತಡೆಗೋಡೆ ನಿರ್ಮಿಸಬೇಕು ಎಂದು ಭಾಸ್ಕರ ಆಚಾರ್ಯ, ಶ್ರೀಧರ ಪೂಜಾರಿ, ವಿದ್ಯಾನಂದ, ಹರೀಶ್ ಪೂಜಾರಿ ಒತ್ತಾಯಿಸಿದ್ದಾರೆ.