ಹಳುವಳ್ಳಿ-ಹೊರನಾಡು ರಸ್ತೆ ಮಧ್ಯೆ ಮಾಗಲು ಎಂಬಲ್ಲಿ ಕಳೆದ ಒಂದು ವರ್ಷದ ಹಿಂದೆಯಷ್ಟೆ ಕಟ್ಟಿದ ತಡೆಗೋಡೆ ಸಂಪೂರ್ಣ ಮುಗುಚಿ ಬಿದ್ದಿದೆ.
ಮಾಗಲು ತಿರುವಿನಲ್ಲಿ ಕಳೆದ ಒಂದು ವರ್ಷದ ಹಿಂದೆ ರಸ್ತೆಯ ಒಂದು ಭಾಗ ಕುಸಿದು ಬಿದ್ದಿತ್ತು.ಅಲ್ಲಿಗೆ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.ಶನಿವಾರ ಸಂಜೆಯ ಹೊತ್ತಿಗೆ ಲಕ್ಷಾನುಗಟ್ಟಲೆ ಮೊತ್ತದ ಈ ತಡೆಗೋಡೆ ಮಣ್ಣು ಪಾಲಾಗಿದೆ.ಇದರಿಂದ ಈ ರಸ್ತೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ.