ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಶ್ರೇಯಂಸ ಕುಮಾರ್ ವಿರುದ್ದ ಪಂಚಾಯಿತಿ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದಾರೆ.
ಉಪ ವಿಭಾಗಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಅರ್ಜಿಯಲ್ಲಿ ಶ್ರೇಯಂಸ ಅವರನ್ನು ಹೊರತುಪಡಿಸಿ ಉಳಿದ 14 ಸದಸ್ಯರು ಸಹಿ ಮಾಡಿದ್ದಾರೆ.
ಶ್ರೇಯಂಸ ಕುಮಾರ್ ಅವರಿಗೆ ಸಂಖ್ಯಾಬಲ ಇಲ್ಲದೆ ಇರುವುದರಿಂದ ಅವರನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಬೇಕು ಎಂದು ಸದಸ್ಯರು ಪತ್ರದಲ್ಲಿ ಆಗ್ರಹಿಸಿದ್ದಾರೆ.
15 ತಿಂಗಳಿನಿಂದ ಪಂಚಾಯಿತಿ ಆಡಳಿತದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇನೆ.ಯಾರಿಗೂ ಭ್ರಷ್ಟಾಚಾರ ಮಾಡಲು ಅವಕಾಶ ನೀಡದೆ ಸ್ವಂತದ ಹಣವನ್ನೂ ಪಂಚಾಯಿತಿ ಕೆಲಸಗಳಿಗೆ ಬಳಸಿದ್ದೇನೆ.ಕೆಲ ಗುತ್ತಿಗೆದಾರರ ಕಳಪೆ ಕಾಮಗಾರಿಗಳಿಗೆ ನಾನು ಅವಕಶ ನೀಡಿಲ್ಲ.ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೆ ನಿಷ್ಠುರನಾಗಿ ನಡೆದುಕೊಂಡಿದ್ದೇನೆ.ಈ ಎಲ್ಲಾ ಕಾರಣಗಳಿಂದ ನನ್ನ ಪದಚ್ಯುತಿಗೆ ಪಿತೂರಿ ನಡೆಸಲಾಗುತ್ತಿದೆ ಎಂದು ಶ್ರೇಯಂಸ ಕುಮಾರ್ ಹೇಳಿದ್ದಾರೆ.