ಕಾಡು ಪ್ರದೇಶದಲ್ಲಿ ಹುಲಿಯೊಂದು ಓಡಾಡುವ ವಿಡಿಯೋ ತುಣುಕೊಂದು ಕಳಸ ತಾಲೂಕಿನಲ್ಲಿ ಮೊಬೈಲಿನಿಂದ ಮೊಬೈಲಿಗೆ ಹರಿದಾಡುತ್ತಿರುವುದಲ್ಲದೆ, ಸ್ಟೇಟಸ್ಸ್ಗೂ ಹಾಕಿಕೊಂಡು, ಇದು ಕುದುರೆಮುಖದ ಭಗವತಿ ಪ್ರದೇಶದಲ್ಲಿ ಕಂಡು ಬಂದಿರುವುದು ಎನ್ನುವಂತವರು ಒಂದೆಡೆಯಾದರೆ, ಲಕ್ಯಾ ಡ್ಯಾಂ ಬಳಿ ಚಿತ್ರೀಕರಿಸಿದ ವಿಡಿಯೋ ಎಂದು ಇನ್ನು ಕೆಲವರು ಮಾತನಾಡಿಕೊಳ್ಳುತ್ತಿದ್ದು, ಇದು ಕುದುರೆಮುಖ ರಸ್ತೆಯಲ್ಲಿ ನಿತ್ಯ ಓಡಾಡುವವರಿಗೆ ಭಯ ಹುಟ್ಟಿಸುವಂತಾಗಿದೆ.
ಈ ವಿಡಿಯೋ ತುಣುಕು ನೋಡಲು ಕುದುರೆಮುಖ ಭಾಗದ್ದೆ ಆಗಿರಬಹುದು ಎಂದು ಅಂದುಕೊಂಡರೂ ಕೂಡ ಈ ಬಗ್ಗೆ ಕುದುರೆಮುಖ ಅರಣ್ಯ ಇಲಾಖೆ ಸಿಬ್ಬಂದಿಗಳು ಇದು ಕುದುರೆಮುಖದ್ದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಸಲಿಗೆ ಒಂದು ವಿಡಿಯೋ ತುಣುಕು ಮಾತ್ರ ಮೊಬೈಲುಗಳಲ್ಲಿ ಹರಿದಾಡುತ್ತಿದ್ದು, ಇದರ ಇನ್ನೊಂದು ವಿಡಿಯೋ ಎಲ್ಲಾ ಸತ್ಯಾ ಸತ್ಯತೆಗಳನ್ನು ಹೊರ ಹಾಕುತ್ತಿದೆ.
ಹುಲಿ ಓಡಾಡುವ ವಿಡಿಯೋ ತುಣುಕು ಕುದುರೆಮುಖ ಭಾಗದಲ್ಲಿ ಕಾಣಿಸಿಕೊಂಡಿರುವುದು ಅಲ್ಲಾ.ಇದು ಶನಿವಾರ ಹೆಬ್ಬೆ ಫಾಲ್ಸ್ ನಿಂದ ಕೆಮ್ಮಣ್ಣಗುಂಡಿಗೆ ಬರುವಾಗ ಸಿಕ್ಕಿದ ಹುಲಿ.ಇದನ್ನು ಚಿತ್ರಿಕರಿಸಲಾಗಿದೆ ಎಂದು ತಿಳಿದು ಬಂದಿದೆ.