ಕಳಸ ತಾಲೂಕಿನ ಹಳುವಳ್ಳಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಹಳುವಳ್ಳಿ ಶಾಲೆಯ ತಡೆಗೋಡೆ ಕುಸಿತಗೊಂಡು ಶಾಲೆ ಅಪಾಯದ ಸ್ಥಿತಿಯಲ್ಲಿದೆ.
ಹಳುವಳ್ಳಿ ದೇವಸ್ಥಾನದಿಂದ ಸುಮಾರು ಮೂವತ್ತು ಅಡಿಗಳಷ್ಟು ಎತ್ತರದಲ್ಲಿರುವ ಶಾಲೆಯ ಸುತ್ತಲೂ ಕಲ್ಲುಗಳಿಂದ ತಡೆಗೋಡೆಯನ್ನು ಕಟ್ಟಲಾಗಿತ್ತು.ಈ ತಡೆಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು ಶಾಲೆ ಕುಸಿದು ಬೀಳುವ ಅಪಾಯ ಎದುರಾಗಿದೆ.