ಕುದುರೆಮುಖ ವಿನೋಭನಗರ ಲೇಬರ್ ಕಾಲೋನಿಯ ಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅದೃಷ್ಟವಶಾತ್ ಲಕ್ಷ್ಮಮ್ಮ ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ಮದ್ಯಾಹ್ನ ಕುದುರೆಮುಖ ಲೇಬರ್ ಕಾಲೋನಿಯ ಲಕ್ಷ್ಮಮ್ಮ ಸೀಬೆ ಹಣ್ಣು ಮಾರಲು ಹೋಗಿದ್ದರು.ಈ ಸಂದರ್ಭದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ.ಗ್ಯಾಸ್ ಸ್ಪೋಟಗೊಂಡ ರಬಸಕ್ಕೆ ಮನೆ ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಕುದುರೆಮುಖ ಪೊಲೀಸರು ಬೇಟಿ ನೀಡಿದ್ದಾರೆ.