ಕಳಸ:ಪವಿತ್ರ ರಂಜಾನ್ ತಿಂಗಳ ಉಪವಾಸ ಸೋಮವಾರ ಮುಸ್ಸಂಜೆ ಮುಕ್ತಾಯವಾಗಿದ್ದು,ಕಳಸದಲ್ಲಿ ಮುಸ್ಲಿಮರು ಸಡಗರ,ಸಂಭ್ರಮದಿಂದ ಮಂಗಳವಾರ ಈದುಲ್ ಫಿತ್ರ್ ಆಚರಿಸಿದರು.
ಪಟ್ಟಣದ ಕಳಸ ಜುಮ್ಮಾ ಮಸೀದಿ,ಬಾಳೆಹೊಳೆ,ಹಿರೇಬೈಲು,ಸಂಸೆ ಮಸೀದಿಗಳಲ್ಲಿ ಮುಸ್ಲಿಮರು ಈದ್ ನಮಾಜ್ ಮಾಡಿದರು.ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.ಮಕ್ಕಳು ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮ ನೆಂಟರಿಷ್ಟರ ಮನೆಗೆ ಹೋಗಿ ಹಬ್ಬದಲ್ಲಿ ಪಾಲ್ಗೊಂಡರು.
ಮದ್ಯಾಹ್ನದ ಬೋಜನಕ್ಕೆ ಅನ್ಯ ಧರ್ಮಿಯದವರನ್ನು ಕರೆದು ಒಟ್ಟಿಗೆ ಬೋಜನವನ್ನು ಸ್ವೀಕರಿಸಿ ಕೋಮು ಸೌಹರ್ದತೆಯನ್ನು ಕಾಪಾಡಿದರು.
Related Stories
September 6, 2024