Blog

Spread the love

ಕಳಸ ಲೈವ್ ವರದಿ
ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಜ್ಞಾನಶಕ್ತಿ ಹೆಚ್ಚುತ್ತದೆ, ಕಲಿಕೆಯ ದೃಷ್ಟಿಯಿಂದಲೂ ಅನುಕೂಲವಾಗುವುದು, ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಹೆಚ್ಚು ಅರಿವು ಮೂಡುತ್ತದೆ ಎಂದು ಶ್ರೀ ಸುಬ್ರಹ್ಮಣೇಶ್ವರ ಸಂಸ್ಕೃತ ಪಾಠಶಾಲಾ, ಕಳಸ ಇಲ್ಲಿಯ ಮುಖ್ಯ ಸಂಸ್ಕøತ ಶಿಕ್ಷಕ ಶಿವರಾಮ ಹೆಚ್.ಕೆ ಹೇಳಿದರು.
ಕಳಸದ ಹೇರಡಿಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಹಾಗೂ ಶ್ರೀ ಸುಬ್ರಹ್ಮಣೇಶ್ವರ ಸಂಸ್ಕೃತ ಪಾಠಶಾಲಾ, ಕಳಸ, ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ “ಆಸ್ಮಾಕಂ ಸಂಸ್ಕೃತಮ್” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಯಾವುದೇ ಭಾಷೆಯಾದರೂ ಅದನ್ನು ಸಂವಹನದ ಮೂಲಕ ಬಳಕೆ ಮಾಡಿದಾಗ ಮಾತ್ರ ಆ ಭಾಷೆ ಬೆಳೆಯುತ್ತದೆ. ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿದ ಭಾಷೆ ಸಂಸ್ಕøತವಾಗಿದೆ. ಅಗಾಧವಾದ ಜ್ಞಾನ ರಾಶಿ ಹೊಂದಿದ ಸಂಸ್ಕೃತ ಭಾಷೆಯಲ್ಲಿ ವೇದ, ಉಪನಿಷತ್ತುಗಳು, ಇತಿಹಾಸ, ಪುರಾಣಗಳು, ಅನೇಕ ಶಾಸ್ತ್ರಗಳ ರಚನೆ ಆಗಿದೆ. ಇಂದಿನ ವಿದ್ಯಾರ್ಥಿಗಳು ಸಂಸ್ಕೃತವನ್ನು ವೈಜ್ಞಾನಿಕ ದೃಷ್ಟಿಕೋನವಿಟ್ಟುಕೊಂಡು ಅಧ್ಯಯನ ಮಾಡಿದರೆ ಆಧುನಿಕ ಭಾಷೆಯೊಂದಿಗೆ ಸಂವಹನಕ್ಕಾಗಲಿ, ಅಧ್ಯಯನ, ಸಂಶೋಧನೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಹೇರಡಿಕೆ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸಮೂರ್ತಿ ಮಾತನಾಡಿ ನಮ್ಮ ಮಾತೃಬಾಷೆಯ ಜೊತೆಗೆ ನಮ್ಮೊಡನೆಯೇ ಇರುವ ಸಂಸ್ಕøತ ಭಾಷೆಯನ್ನು ಉಳಿಸಿ ರಕ್ಷಿಸಬೇಕು. ಸಂಸ್ಕೃತ ಅಧ್ಯಯನದಿಂದ ಉತ್ತಮ ಸನ್ಮಾರ್ಗ, ಜ್ಞಾನ, ದೊರೆಯುತ್ತದೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ ಯ ಅಧ್ಯಕ್ಷೆ ಶ್ರೀಮತಿ ಜಯಾ, ಶಿಕ್ಷಕರಾದ ಮಧುಸೂದನ.ವೈ.ಪಿ., ಸಂಸ್ಕೃತ ಪಾಠಶಾಲೆಯ ಶಿಕ್ಷಕರಾದ ಸತೀಶ.ವಿ, ಅನುಪಮಾ.ಕೆ.ಎನ್. ಹಾಜರಿದ್ದರು.