Blog

Spread the love

ಕಳಸ ಲೈವ್ ವರದಿ
ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳ ಜೊತೆಗೆ ಹೊಸ ಹೊಸ ಲೇಖಕರು ಹುಟ್ಟಿಕೊಂಡು ಅವರ ಪುಸ್ತಕಗಳು ಬಿಡುಗಡೆಗೊಂಡಾಗ ಮಾತ್ರ ಪರಿಷತ್ತಿನ ಬೆಳವಣಿಗೆ ಕಾಣಲು ಸಾಧ್ಯ ಎಂದು ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಬಿ ಜೋಷಿ ಹೇಳಿದರು.
ಕಳಸ ಕಸಾಪ ಮಹಿಳಾ ಘಟಕದ ವತಿಯಿಂದ ಕಳಸ ಹಂದಿಗೋಡು ರಾಮಚಂದ್ರಯ್ಯರವರ ಮನೆಯಲ್ಲಿ ನಡೆದ “ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ” ಕಾರ್ಯಕ್ರಮದಲ್ಲಿ ನಳಿನಿ ಕೃಷ್ಣ ಇವರ “ಅರುವತ್ತರ ಅರಳು” ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಲೇಖಕರನ್ನು ಮತ್ತು ಪ್ರಕಾಶಕರಾದ ಸಾವಿತ್ರಿ ಮನೋಹರ್ ರವರನ್ನು ಸನ್ಮಾನಿಸಿ ಕಳಸದ ಮಹಿಳಾ ಘಟಕದ ಕಾರ್ಯಕ್ರಮಗಳಲ್ಲಿ ಬೆರೆಯುವುದೇ ಒಂದು ಸಂಭ್ರಮ ಮತ್ತು ಸಂತೋಷ ಉತ್ತಮ ಸಂಘಟನೆಗೆ ಮತ್ತು ಸಾಹಿತ್ಯ ಸಾಧಕರಿಗೆ ಇದೊಂದು ಉತ್ತಮ ವೇದಿಕೆ ಎಂದರು.
ಕಳಸ ತಾಲ್ಲೂಕು ಕಸಾಪ ಅಧ್ಯಕ್ಷರಾದ ಅ.ರಾ. ಸತೀಶ್ಚಂದ್ರ ಪುಸ್ತಕ ಬಿಡುಗಡೆ ಮಾಡಿ ಸಾಹಿತ್ಯ ಪರಿಷತ್ತಿನಲ್ಲಿ ಈ ರೀತಿಯಲ್ಲಿ ಪುಸ್ತಕ ಬಿಡುಗಡೆ ನಡೆದಾಗಲೇ ಸಾಧನೆಯ ತೃಪ್ತಿ ಪಡೆಯಲು ಸಾಧ್ಯ. ಕಳಸದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದ ನಂತರದ ದಿನಗಳಲ್ಲಿ ಸಾಹಿತ್ಯದೆಡೆಗಿನ ಒಲವು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಕಳಸದ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸಗಳು ಸಾಹಿತ್ಯ ಸೇವೆಗೆ ಎಲ್ಲರನ್ನೂ ಪ್ರೇರೇಪಿಸುವಂತೆ ಮಾಡಿದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಬೇಗಮ್ ಮಾತನಾಡಿ ಊರಿನ ಸಾಹಿತ್ಯಾಸಕ್ತರು ನೀಡುತ್ತಿರುವ ಪ್ರೋತ್ಸಾಹ ಮತ್ತು ಸಹಕಾರದಿಂದ ಇಷ್ಟು ಒಳ್ಳೆಯ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗುತ್ತಿದೆ. ನಮ್ಮ ಸಂಘಟನೆಯೇ ನಮ್ಮ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಪಾಂಡುರಂಗ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಕಸಬಾ ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ಸಾಹಿತಿ ಪ್ರೇಮ್ ಕುಮಾರ್, ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಥ ವೆಂಕಟಸುಬ್ಬಯ್ಯ, ರಾಮಚಂದ್ರ ಹೆಬ್ಬಾರ್, ನಾಗಮಣಿ ಪೂರ್ಣಚಂದ್ರ, ಡಾ. ಜಾನಕಿ ಸುಂದರೇಶ್, ಸುಜಯಾ ಸದಾನಂದ, ಸುಮನಾ ಜಯರಾಜ್ ಇತರರು ಇದ್ದರು.